ಅಗ್ನಿ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು.ವೇದಗಳಲ್ಲಿ ಹೇಳಲಾಗಿರುವ ಅಗ್ನಿದೇವತೆಯ ಕುರಿತಾದ ಈ ಪುರಾಣದಲ್ಲಿ ಕಾವ್ಯ,ನಾಟಕಗಳ ಲಕ್ಷಣಗಳು,ರಸವರ್ಣನೆಗಳು,ಮಂತ್ರ ಮತ್ತು ಮಂತ್ರವಿಧಾನಗಳು,ರಾಜಧರ್ಮ ಮುಂತಾದ ವಿಚಾರಗಳು ಹೇಳಲ್ಪಟ್ಟಿದೆ.ಇದರ ಹೆಚ್ಚಿನ ಭಾಗಗಳು ೮ನೇ ಶತಮಾನದಿಂದ ೧೧ನೇ ಶತಮಾನ ಅಂದಾಜಿನಲ್ಲಿ ರಚಿಸಲ್ಪಟ್ಟವು ಎಂದು ವಿದ್ವಾಂಸರ ಅಭಿಪ್ರಾಯ. ಸಂಸ್ಕೃತದಲ್ಲಿರುವ ಹದಿನೆಂಟು ಮುಖ್ಯಪುರಾಣಗಳಲ್ಲೊಂದು. ಅಗ್ನಿದೇವತೆಯಿಂದ ವಸಿಷ್ಠಮುನಿಗೆ ಉಪದಿಷ್ಟವಾದುದೆಂದು ಪ್ರತೀತಿ. ಕಾಲ ಸುಮಾರು ಕ್ರಿ.ಶ. 7ನೆಯ ಶತಮಾನ. ಪ್ರಧಾನವಾಗಿ ಶೈವಮತಕ್ಕೆ ಸಂಬಂಧಪಟ್ಟ ವಿಚಾರಗಳಲ್ಲದೆ ಜಗತ್ತಿನ ಸೃಷ್ಟಿ, ಧರ್ಮಶಾಸ್ತ್ರ, ರಾಜಧರ್ಮ, ಆಯುರ್ವೇದ, ಅಲಂಕಾರ, ಛಂದಸ್ಸು ಮುಂತಾದ ಅನೇಕ ವಿಷಯಗಳನ್ನೊಳಗೊಂಡು ವಿಶ್ವಕೋಶದಂತಿದೆ. == ಬಾಹ್ಯ ಸಂಪರ್ಕಗಳು == , . (1876). ( ). . 2009-07-24 ವೇಬ್ಯಾಕ್ ಮೆಷಿನ್ ನಲ್ಲಿ.